ರಾಮೋಜಿ ಫಿಲ್ಮ್ ಸಿಟಿಯಲ್ಲಿ “ಕಬ್ಜಾ”, ಶೂಟಿಂಗ್ ಪ್ರಾರಂಭವಾಗುತ್ತಿದೆ

ರಾಮೋಜಿ ಫಿಲ್ಮ್ ಸಿಟಿಯಲ್ಲಿ “ಕಬ್ಜಾ”, ಶೂಟಿಂಗ್ ಪ್ರಾರಂಭವಾಗುತ್ತಿದೆ

ಸೆಪ್ಟೆಂಬರ್ ನಿಂದ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ನಿರ್ಮಾಣವಾಗಿರುವ ಸೆಟ್ಗಳಲ್ಲಿ ಚಿತ್ರೀಕರಣ ನಡೆಸಿದ ನಂತರ ಡಿಸೆಂಬರ್ ತಿಂಗಳಿನಲ್ಲಿ ರಾಮೋಜಿ ರಾವ್ ಫಿಲಂ ಸಿಟಿ ಯಲ್ಲಿ “ಕಬ್ಜ” ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ರಾಮೋಜಿ ರಾವ್ ಫಿಲಂ ಸಿಟಿ ಯಲ್ಲಿ “ಕಬ್ಜ” ಚಿತ್ರದ ಚಿತ್ರೀಕರಣಕ್ಕಾಗಿ ಬೃಹದಾಕಾರದ ಸೆಟ್ಟುಗಳನ್ನು ಕಲಾ ನಿರ್ದೇಶಕ ಶಿವಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರಿನ ದೇವನಹಳ್ಳಿ ಬಳಿ ಒಂದಷ್ಟು ಸೆಟ್ಟುಗಳನ್ನು ನಿರ್ಮಾಣ ಮಾಡುವುದಾಗಿ ನಿರ್ದೇಶಕ ಆರ್. ಚಂದ್ರು ಅವರು ಹೇಳಿದ್ದಾರೆ. “ಕಬ್ಜ” ಚಲನಚಿತ್ರವನ್ನು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಸಲಾಗುವುದು, ಹಾಗೂ ಉಳಿದ ಭಾಷೆಗಳಲ್ಲಿ ಮಾತುಗಳನ್ನು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಲಾಗುವುದು.

ಕಬ್ಜಾ ಚಲನಚಿತ್ರಕ್ಕಾಗಿ ಉಪೇಂದ್ರ ಮತ್ತು ಆರ್ ಚಂದ್ರು ಮತ್ತೆ ಒಂದಾಗುತ್ತಾರೆ

ಕಬ್ಜಾ ಚಲನಚಿತ್ರಕ್ಕಾಗಿ ಉಪೇಂದ್ರ ಮತ್ತು ಆರ್ ಚಂದ್ರು ಮತ್ತೆ ಒಂದಾಗುತ್ತಾರೆ

ಐ ಲವ್ ಯು ಚಿತ್ರದ ಅದ್ಭುತ ಯಶಸ್ಸಿನ ನಂತರ “ಉಪೇಂದ್ರ” ಹಾಗೂ “ಆರ್. ಚಂದ್ರು” ಅವರು “ಕಬ್ಜ” ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಮಾರುಕಟ್ಟೆಯು “ಭಾರತ ಚಿತ್ರರಂಗದ” ಮಾರುಕಟ್ಟೆಯಾಗಿ ವಿಸ್ತರಿಸಿ ನಿಂತಿದೆ.. ಕನ್ನಡ ಚಿತ್ರಗಳು ಭಾರತ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡುತ್ತಿವೆ ಹಾಗೂ ತಾಂತ್ರಿಕವಾಗಿಯೂ ಬಹಳ ಮುಂಚೂಣಿಯಲ್ಲಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಭಾರತ ಚಿತ್ರರಂಗದ ಮಾರುಕಟ್ಟೆಗೆ ಅನುಗುಣವಾಗಿ ವಿಷಯಗಳನ್ನು ವಿಸ್ತರಿಸಲು ತಾಂತ್ರಿಕವಾಗಿ ಚಿತ್ರತಂಡ ವಿನೂತನವಾಗಿ “ಕಬ್ಜ” ಚಿತ್ರದ ವೆಬ್ಸೈಟ್ ಅನ್ನು 7 ಭಾಷೆಗಳಲ್ಲಿ ಮೊದಲಬಾರಿಗೆ ಲಾಂಚ್ ಮಾಡುತ್ತಿದ್ದಾರೆ. ನಮ್ಮ ವೆಬ್‌ಸೈಟ್ “ಕಬ್ಜ” ಚಲನಚಿತ್ರ ನಿರ್ಮಾಣ ಮತ್ತು ಪಾತ್ರವರ್ಗದ ಸಂಪೂರ್ಣ ಮಾಹಿತಿ ಮತ್ತು ವಿಷಯಗಳನ್ನು ಒಳಗೊಂಡಿದೆ. ಚಿತ್ರದ ನಿರ್ದೇಶಕರು, ನಾಯಕ, ನಾಯಕಿ, ಪೋಷಕ ಕಲಾವಿದರು ಹಾಗೂ ತಾಂತ್ರಿಕ ವರ್ಗದವರ ಮಾಹಿತಿ ಮತ್ತು ಫಿಲ್ಮೋಗ್ರಫಿ ಯ ಎಲ್ಲಾ ಮಾಹಿತಿಗಳು ಈ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. “ಕಬ್ಜ” ಚಿತ್ರದ ತಂತ್ರಜ್ಞರು ಹಾಗೂ ಚಿತ್ರದ ಪಾತ್ರವರ್ಗವನ್ನು ಈ ವೆಬ್ಸೈಟ್ನಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ನಮ್ಮ ಚಲನಚಿತ್ರ ನಿರ್ಮಾಣದ ಪ್ರತಿಯೊಂದು ಮಾಹಿತಿ ಮತ್ತು ವಿಷಯವನ್ನು ಅಧಿಕೃತವಾಗಿ ನಮೂದಿಸಲಾಗಿದೆ. ಪೋಸ್ಟರ್‌ಗಳು, ಫೋಟೋ ಗ್ಯಾಲರಿ, ಲೇಖನಗಳು, ಟೀಸರ್, ಟ್ರೈಲರ್, ಕಲಾವಿದರು ಮತ್ತು ತಂತ್ರಜ್ಞರ ಸಾಮಾಜಿಕ ಜಾಲತಾಣ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಎಲ್ಲಾ ಖಾತೆಗಳ ಲಿಂಕನ್ನು ನೇರವಾಗಿ ವೆಬ್ಸೈಟ್ಗೆ ಲಿಂಕ್ ಮಾಡಲಾಗಿದೆ ಆದ್ದರಿಂದ “ಕಬ್ಜ” ಚಿತ್ರದ ಕಲಾವಿದರು ತಂತ್ರಜ್ಞರನ್ನು ಒಳಗೊಂಡ ಎಲ್ಲ ವಿವರಗಳನ್ನು ಒಂದೇ ಕ್ಲಿಕ್ ನಲ್ಲಿ ನೋಡಬಹುದು. “ಕಬ್ಜ” ಚಿತ್ರವು ಪ್ಯಾನ್ ಇಂಡಿಯಾ ಮೂವಿ ಆಗಿರುವುದರಿಂದ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಲು www.kabzamovie.com ವೆಬ್ಸೈಟನ್ನು ಸಂಪರ್ಕಿಸಿದರೆ ಅವರಿಗೆ ಬೇಕಾದ “ಕಬ್ಜ” ಚಿತ್ರದ ಪ್ರತಿಯೊಂದು ಮಾಹಿತಿಯು ನಮ್ಮ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.

ಅಧಿಕೃತ ಕಬ್ಜಾ ಮೂವಿ ವೆಬ್‌ಸೈಟ್ ಪ್ರಾರಂಭಿಸಲಾಗಿದೆ

ಅಧಿಕೃತ ಕಬ್ಜಾ ಮೂವಿ ವೆಬ್‌ಸೈಟ್ ಪ್ರಾರಂಭಿಸಲಾಗಿದೆ

ಆಗಸ್ಟ್ 29ರಂದು “ಕಬ್ಜ” ಚಿತ್ರದ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ಶೇರ್ಟನ್ ಹೋಟೆಲಿನಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ (MLC, Ex Minister), ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಿತ್ರದ ನಾಯಕ ನಟ ಉಪೇಂದ್ರ ಹಾಗೂ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಉದ್ಯಮಿ ರಾಜಕಾರಣಿ ಎಂಟಿಬಿ ನಾಗರಾಜ್ ಅವರು “ಕಬ್ಜ” ಚಿತ್ರದ ವೆಬ್ಸೈಟನ್ನು ಲೋಕಾರ್ಪಣೆ ಮಾಡಿದರು. ಎಂಟಿಬಿ ನಾಗರಾಜ್ ಅವರು ಮಾತನಾಡಿ ನಿರ್ದೇಶಕ ಆರ್ ಚಂದ್ರು ಅವರು ನನ್ನ ಸಂಬಂಧಿ ಮತ್ತು ನನ್ನ ಆಪ್ತ, ಅವರು ಏನೇ ಕೆಲಸ ಮಾಡಿದರು ನನ್ನ ಬೆಂಬಲ ಸಹಕಾರವಿರುತ್ತದೆ ಎಂದು ಹೇಳಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡಿ ನಿರ್ದೇಶಕ ಚಂದ್ರು ಅವರು ನನ್ನ ಕುಟುಂಬದ ಒಬ್ಬ ಸದಸ್ಯರಿದ್ದಂತೆ ಮತ್ತು ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ ಎಂದು ಘೋಷಿಸಿದರು. ನಾಯಕನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತನಾಡಿ ಚಂದ್ರು ಅವರ ಜೊತೆ ಇದು ನನ್ನ ಮೂರನೇ ಸಿನಿಮಾ. ಚಂದ್ರು ಅವರ ಕಾರ್ಯವೈಖರಿ ಹಾಗೂ ಪಾಸಿಟಿವ್ ಎನರ್ಜಿ ನಾನು ಅವರ ಜೊತೆ ಮೂರನೇ ಸಿನಿಮಾ ಮಾಡುವಂತೆ ಮಾಡಿದೆ ಎಂದು ಹೇಳಿದರು.

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ  ಕುಳಿತ  ರಿಯಲ್  ಸ್ಟಾರ್ ಉಪೇಂದ್ರ ಅವರ  “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ “ಕಬ್ಜ” ಚಿತ್ರ ನಿರ್ಮಾಣವಾಗುತ್ತಿದೆ.
ಸೂಪರ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರವು 2019 ಅಕ್ಟೋಬರ್ ವೇಳೆಗೆ ಶುರುವಾಯಿತು. “ಕಬ್ಜ” ಚಿತ್ರಕಥೆಯು 1947 ರಿಂದ 1980 ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ.
“ಕಬ್ಜ” ಚಿತ್ರವು ಮಾಫಿಯಾ ಜಗತ್ತಿನ ಕಥಾಹಂದರವನ್ನು ಹೊಂದಿದೆ. ಉಪೇಂದ್ರ ಅವರು ಜಾವ ಬೈಕಿನಲ್ಲಿ ಕುಳಿತ ಪೋಸ್ಟರ್ ಗಳನ್ನು ನೋಡಿದ ಅಭಿಮಾನಿಗಳು ರೋಮಾಂಚಿತ ರಾಗಿದ್ದಾರೆ ಎಂದು ಆರ್. ಚಂದ್ರು ಅವರು ತಿಳಿಸಿದ್ದಾರೆ.
“ಕಬ್ಜ” ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಅವರು ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗೂ ಆ ಪಾತ್ರ ಅಚ್ಚರಿಯಿಂದ ಕೂಡಿರುತ್ತದೆ.
ಕೋವಿಡ್ ಪರಿಣಾಮವಾಗಿ ಲಾಕ್ಡೌನ್ ಆಗಿದ್ದರಿಂದ ಶೇಕಡಾ 30ರಷ್ಟು ಚಿತ್ರೀಕರಣ ಮುಗಿದಿದ್ದ “ಕಬ್ಜ” ಚಿತ್ರದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು.
“ಕಬ್ಬ” ಚಿತ್ರದ ತೆಲುಗು ಅವತರಣಿಕೆಯನ್ನು ತೆಲುಗಿನ ಖ್ಯಾತ ನಿರ್ಮಾಪಕ ಲಗಡಪಟಿ ಶ್ರೀಧರ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ “ಆರ್ ಚಂದ್ರು” ಅವರು ನಿರ್ದೇಶಿಸುತ್ತಿರುವ “ಕಬ್ಜ” ಚಿತ್ರವು ಅದ್ದೂರಿ ವೆಚ್ಚದಲ್ಲಿ, ಏಳು ಭಾಷೆಗಳಲ್ಲಿ (ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒರಿಯಾ ಮತ್ತು ಮರಾಠಿ) ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ, “ಕಬ್ಜ” ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ರಿಯಲ್ ಸ್ಟಾರ್ “ಉಪೇಂದ್ರ” ಅವರ ಬಹುನಿರೀಕ್ಷಿತ “ಕಬ್ಜ” ಚಿತ್ರದಲ್ಲಿ ಭೂಗತ ದೊರೆಯ ಪಾತ್ರದಲ್ಲಿ “ಉಪೇಂದ್ರ” ಅವರು ದಿನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆಯಲ್ಲಿದೆ.
“ಕಬ್ಜ” ಚಿತ್ರದ ಚಿತ್ರೀಕರಣ ಬೆಂಗಳೂರು, ಹೈದರಾಬಾದ್, ಮೈಸೂರು, ಮಂಗಳೂರು, ಗುಜರಾತ್, ಛತ್ತಿಸ್ಗಢ, ರಾಮೇಶ್ವರಂ ಹಾಗೂ ಇನ್ನು ಹಲವಾರು ಕಡೆ ಚಿತ್ರೀಕರಣವನ್ನು ನಡೆಸಲಾಗುತ್ತದೆ.

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆ ಚಿತ್ರದಲ್ಲಿ ಅಮಿತಾ ಬಚ್ಚನ್ ಮತ್ತು ಗಂಧದಗುಡಿ ಚಿತ್ರದಲ್ಲಿ
ಡಾ. ರಾಜಕುಮಾರ್ ಅವರು ಬಳಸಿದ ಪಿಸ್ತೂಲನ್ನು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು “ಕಬ್ಜ” ಚಿತ್ರದಲ್ಲಿ ಬಳಸಿದ್ದಾರೆ.
ಈ ವಿಚಾರವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದೊಡ್ಡ ಮಟ್ಟದ ಸುದ್ದಿಯಾಯಿತು. ಈ ವಿಚಾರ ಚಿತ್ರ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
ಬೆಂಗಳೂರಿನಲ್ಲಿರುವ ಬೆಂಗಳೂರು ಗನ್ ಹೌಸ್ ಸಂಸ್ಥೆಯಿಂದ ಕಬ್ಜ ಚಿತ್ರದ ಚಿತ್ರೀಕರಣಕ್ಕೆ ಹಲವಾರು ರೀತಿಯ ಬಂzÀÆಕುಗಳನ್ನು ಬಳಸಲಾಗಿದೆ. ಹಾಗೂ ವಿಶಿಷ್ಟವಾದ ರೀತಿಯ ಗನ್ನುಗಳನ್ನು ಬಳಸಲಾಗಿದೆ.
ಬೆಂಗಳೂರಿನ ಗನ್ ಹೌಸ್ ನಿಂದಲೇ ಶೋಲೆ ಹಾಗೂ ಗಂಧದಗುಡಿ ಚಿತ್ರಕ್ಕೆ ಬಂದುಕುಗಳನ್ನು ಒದಗಿಸಿದ್ದರು.
“ಕಬ್ಜ” ಚಿತ್ರದ ಚಿತ್ರೀಕರಣಕ್ಕೆ “ಬೆಂಗಳೂರು ಗನ್ ಹೌಸ್” ಸಂಸ್ಥೆಯು ಒಪ್ಪಂದ ಮಾಡಿಕೊಂಡಿದ್ದು, ಐದು ಹಂತಗಳಲ್ಲಿ ನಡೆಯುವ ಚಿತ್ರದ ಚಿತ್ರೀಕರಣಕ್ಕಾಗಿ ಸುಮಾರು 170 ರಿಂದ 200 ದಿನದ ಚಿತ್ರೀಕರಣಕ್ಕೆ ಬಂದುಕುಗಳನ್ನು ಪೂರೈಸಲು ಸಮ್ಮತಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ 35 ದಿನಗಳ ನಿರ್ಣಾಯಕ ಭಾಗದ ಚಿತ್ರೀಕರಣವನ್ನು ಮಾಡಲಾಗಿದೆ.
“ಎಂಟಿಬಿ ನಾಗರಾಜ್” ಅವರು ಅರ್ಪಿಸುತ್ತಿರುವ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರುವ “ಕಬ್ಜ” ಚಿತ್ರವು 2021 ರ ವೇಳೆಗೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
ನಾಯಕಿ ಪಾತ್ರಕ್ಕೆ ನಾಯಕಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ತಮಿಳು, ತೆಲುಗು, ಹಿಂದಿ, ಮರಾಠಿ, ಓರಿಯ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
“ಕಬ್ಜ” ಚಿತ್ರದ ಛಾಯಾಗ್ರಾಹಕರಾಗಿ ಅರ್ಜುನ್ ಶೆಟ್ಟಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.
“ಕಬ್ಜ” ಚಿತ್ರವು 1945 ರಿಂದ 1985 ರ ಅವಧಿಯ ಭೂಗತ ಜಗತ್ತನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ಚಿತ್ರವಾಗಿದೆ.
ರಿಯಲ್ ಸ್ಟಾರ್ “ಉಪೇಂದ್ರ” ಅವರು ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗೂ ನಿರ್ಮಾಪಕ- ನಟ ನವೀನ್, ಕಬೀರ್ ದುಹಾನ್ ಸಿಂಗ್, ಕೋಟ ಶ್ರೀನಿವಾಸ ರಾವ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು, ಎಂ ಕಾಮರಾಜ್, ಅವಿನಾಶ್ ಹಾಗೂ ಹಲವು ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.