Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

Written by BATS Creations

April 21, 2020

ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ “ಕಬ್ಜ” ಚಿತ್ರ ನಿರ್ಮಾಣವಾಗುತ್ತಿದೆ.
ಸೂಪರ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರವು 2019 ಅಕ್ಟೋಬರ್ ವೇಳೆಗೆ ಶುರುವಾಯಿತು. “ಕಬ್ಜ” ಚಿತ್ರಕಥೆಯು 1947 ರಿಂದ 1980 ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ.
“ಕಬ್ಜ” ಚಿತ್ರವು ಮಾಫಿಯಾ ಜಗತ್ತಿನ ಕಥಾಹಂದರವನ್ನು ಹೊಂದಿದೆ. ಉಪೇಂದ್ರ ಅವರು ಜಾವ ಬೈಕಿನಲ್ಲಿ ಕುಳಿತ ಪೋಸ್ಟರ್ ಗಳನ್ನು ನೋಡಿದ ಅಭಿಮಾನಿಗಳು ರೋಮಾಂಚಿತ ರಾಗಿದ್ದಾರೆ ಎಂದು ಆರ್. ಚಂದ್ರು ಅವರು ತಿಳಿಸಿದ್ದಾರೆ.
“ಕಬ್ಜ” ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಅವರು ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗೂ ಆ ಪಾತ್ರ ಅಚ್ಚರಿಯಿಂದ ಕೂಡಿರುತ್ತದೆ.
ಕೋವಿಡ್ ಪರಿಣಾಮವಾಗಿ ಲಾಕ್ಡೌನ್ ಆಗಿದ್ದರಿಂದ ಶೇಕಡಾ 30ರಷ್ಟು ಚಿತ್ರೀಕರಣ ಮುಗಿದಿದ್ದ “ಕಬ್ಜ” ಚಿತ್ರದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು.
“ಕಬ್ಬ” ಚಿತ್ರದ ತೆಲುಗು ಅವತರಣಿಕೆಯನ್ನು ತೆಲುಗಿನ ಖ್ಯಾತ ನಿರ್ಮಾಪಕ ಲಗಡಪಟಿ ಶ್ರೀಧರ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ “ಆರ್ ಚಂದ್ರು” ಅವರು ನಿರ್ದೇಶಿಸುತ್ತಿರುವ “ಕಬ್ಜ” ಚಿತ್ರವು ಅದ್ದೂರಿ ವೆಚ್ಚದಲ್ಲಿ, ಏಳು ಭಾಷೆಗಳಲ್ಲಿ (ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒರಿಯಾ ಮತ್ತು ಮರಾಠಿ) ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ, “ಕಬ್ಜ” ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ರಿಯಲ್ ಸ್ಟಾರ್ “ಉಪೇಂದ್ರ” ಅವರ ಬಹುನಿರೀಕ್ಷಿತ “ಕಬ್ಜ” ಚಿತ್ರದಲ್ಲಿ ಭೂಗತ ದೊರೆಯ ಪಾತ್ರದಲ್ಲಿ “ಉಪೇಂದ್ರ” ಅವರು ದಿನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆಯಲ್ಲಿದೆ.
“ಕಬ್ಜ” ಚಿತ್ರದ ಚಿತ್ರೀಕರಣ ಬೆಂಗಳೂರು, ಹೈದರಾಬಾದ್, ಮೈಸೂರು, ಮಂಗಳೂರು, ಗುಜರಾತ್, ಛತ್ತಿಸ್ಗಢ, ರಾಮೇಶ್ವರಂ ಹಾಗೂ ಇನ್ನು ಹಲವಾರು ಕಡೆ ಚಿತ್ರೀಕರಣವನ್ನು ನಡೆಸಲಾಗುತ್ತದೆ.

More News About KABZA

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆ ಚಿತ್ರದಲ್ಲಿ ಅಮಿತಾ ಬಚ್ಚನ್ ಮತ್ತು ಗಂಧದಗುಡಿ ಚಿತ್ರದಲ್ಲಿಡಾ. ರಾಜಕುಮಾರ್ ಅವರು ಬಳಸಿದ ಪಿಸ್ತೂಲನ್ನು ಚಿತ್ರದಲ್ಲಿ ರಿಯಲ್ ಸ್ಟಾರ್...

“ಕಬ್ಜ” ಚಿತ್ರವು ನಿರ್ದೇಶಕ ಆರ್. ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಬ್ರಹ್ಮ ಮತ್ತು ಐ ಲವ್ ಯು ನಂತರ ಮೂರನೇ ಕಾಂಬಿನೇಷನ್ ಚಿತ್ರವಾಗಿದೆ.

“ಕಬ್ಜ” ಚಿತ್ರವು ನಿರ್ದೇಶಕ ಆರ್. ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಬ್ರಹ್ಮ ಮತ್ತು ಐ ಲವ್ ಯು ನಂತರ ಮೂರನೇ ಕಾಂಬಿನೇಷನ್ ಚಿತ್ರವಾಗಿದೆ.

“ಕಬ್ಜ” ಚಿತ್ರದ ಕಥೆಯು 50 ರ ದಶಕದ ಹಿನ್ನೆಲೆಯಲ್ಲಿ ನಡೆಯುವ ಮಾಫಿಯಾ ಹಿನ್ನೆಲೆಯ ಕಥಾವಸ್ತುವಾಗಿದೆ. ಅದಕ್ಕಾಗಿಯೇ 50 ರ ದಶಕದ ರೀತಿಯಲ್ಲಿಯೇ...