“ಕಬ್ಜ” ಚಿತ್ರವು ನಿರ್ದೇಶಕ ಆರ್. ಚಂದ್ರು ಹಾಗೂ ನಾಯಕ ಉಪೇಂದ್ರ ಅವರ ಮೂರನೇ ಕಾಂಬಿನೇಷನ್ ಚಿತ್ರವಾಗಿದೆ. “ಕಬ್ಜ” ಚಿತ್ರಕಥೆಯು 50ರಿಂದ 80ರ ದಶಕದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ ಹಾಗಾಗಿ ಚಿತ್ರದ ದೃಶ್ಯಗಳನ್ನು ಅದೇ ಮಾದರಿಯಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ. “ಕಬ್ಜ” ಚಿತ್ರದ ಪ್ರತಿಯೊಂದು ದೃಶ್ಯವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಲು ಉದ್ದೇಶಿಸಿರುವ ಚಿತ್ರತಂಡ ಸುಮಾರು 200 ದಿನಗಳು ಚಿತ್ರೀಕರಣ ನಡೆಸಲಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ “ಕಬ್ಜಾ”, ಶೂಟಿಂಗ್ ಪ್ರಾರಂಭವಾಗುತ್ತಿದೆ
ಸೆಪ್ಟೆಂಬರ್ ನಿಂದ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ನಿರ್ಮಾಣವಾಗಿರುವ ಸೆಟ್ಗಳಲ್ಲಿ ಚಿತ್ರೀಕರಣ ನಡೆಸಿದ ನಂತರ ಡಿಸೆಂಬರ್ ತಿಂಗಳಿನಲ್ಲಿ...