ಸೆಪ್ಟೆಂಬರ್ ನಿಂದ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ನಿರ್ಮಾಣವಾಗಿರುವ ಸೆಟ್ಗಳಲ್ಲಿ ಚಿತ್ರೀಕರಣ ನಡೆಸಿದ ನಂತರ ಡಿಸೆಂಬರ್ ತಿಂಗಳಿನಲ್ಲಿ ರಾಮೋಜಿ ರಾವ್ ಫಿಲಂ ಸಿಟಿ ಯಲ್ಲಿ “ಕಬ್ಜ” ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ರಾಮೋಜಿ ರಾವ್ ಫಿಲಂ ಸಿಟಿ ಯಲ್ಲಿ “ಕಬ್ಜ” ಚಿತ್ರದ ಚಿತ್ರೀಕರಣಕ್ಕಾಗಿ ಬೃಹದಾಕಾರದ ಸೆಟ್ಟುಗಳನ್ನು ಕಲಾ ನಿರ್ದೇಶಕ ಶಿವಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರಿನ ದೇವನಹಳ್ಳಿ ಬಳಿ ಒಂದಷ್ಟು ಸೆಟ್ಟುಗಳನ್ನು ನಿರ್ಮಾಣ ಮಾಡುವುದಾಗಿ ನಿರ್ದೇಶಕ ಆರ್. ಚಂದ್ರು ಅವರು ಹೇಳಿದ್ದಾರೆ. “ಕಬ್ಜ” ಚಲನಚಿತ್ರವನ್ನು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಸಲಾಗುವುದು, ಹಾಗೂ ಉಳಿದ ಭಾಷೆಗಳಲ್ಲಿ ಮಾತುಗಳನ್ನು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಲಾಗುವುದು.
ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ...